Post office Recruitment 2025: ಪೋಸ್ಟ್ ಆಫೀಸ್ ಹೊಸ ನೇಮಕಾತಿ! ತಿಂಗಳಿಗೆ ರೂ.85,000 ವರೆಗೆ ಸಂಬಳ, ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಪೋಸ್ಟ್ ಆಫೀಸ್ ವತಿಯಿಂದ ಪದವಿ ಪಾಸಾದಂತ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್, ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಅಂಚೆ ಇಲಾಖೆ ಇದೀಗ ತನ್ನ ಶಾಖೆಯಲ್ಲಿ ಖಾಲಿ ಇರುವಂತೆ ವಿವಿಧ ಒಟ್ಟು 129 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಸುವರ್ಣ ಅವಕಾಶ
ಆದ್ದರಿಂದ ನಾವು ಈ ಲೇಖನ ಮೂಲಕ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ 129 ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಹಾಗೂ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಮಾಹಿತಿ ತಿಳಿಯೋಣ ಇದರ ಜೊತೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯು ಕೂಡ ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ನೀವು ಈ ಲೇಖನನ್ನು ನಿರುದ್ಯೋಗಿಗಳಿಗೆ ಶೇರ್ ಮಾಡಿ
ಪೋಸ್ಟ್ ಆಫೀಸ್ (Post office Recruitment 2025) ಹೊಸ ನೇಮಕಾತಿ.?
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಅಂಚೆ ಇಲಾಖೆ ಇದೀಗ ತನ್ನ ಶಾಖೆಯಲ್ಲಿ ಖಾಲಿ ಇರುವಂತೆ ವಿವಿಧ ಅಂಚೆ ಸಹಾಯಕ ಮತ್ತು ಪೋಸ್ಟ್ ಆಫೀಸ್ ಅಸಿಸ್ಟೆಂಟ್ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಇದೀಗ ನೇಮಕಾತಿ ಮಾಡಿಕೊಳ್ಳಲು ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕೂಡಲೇ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ಇದೀಗ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಸುಮಾರು 129 ಹುದ್ದೆಗಳು ಖಾಲಿ ಇವೆ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2 ಜುಲೈ 2025 ನಿಗದಿ ಮಾಡಿದೆ ಆದ್ದರಿಂದ ನಿರುದ್ಯೋಗಿಗಳು ಈ ದಿನಾಂಕದ ಒಳಗಡೆ ಪೋಸ್ಟ್ ಆಫೀಸ್ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು
ಹುದ್ದೆಗಳ ನೇಮಕಾತಿ (Post office Recruitment 2025) ವಿವರ..?
ನೇಮಕಾತಿ ಇಲಾಖೆ:- ಕರ್ನಾಟಕ ಅಂಚೆ ಇಲಾಖೆ
ಖಾಲಿ ಹುದ್ದೆಗಳ ಸಂಖ್ಯೆ:- 129 ಹುದ್ದೆಗಳು
ಹುದ್ದೆಗಳ ವಿವರ:-
1) ಅಂಚೆ ಸಹಾಯಕ :- 05 ಹುದ್ದೆಗಳು
2) ಪೋಸ್ಟ್ ಆಫೀಸ್ ಅಸಿಸ್ಟೆಂಟ್:- 114 ಹುದ್ದೆಗಳು
3) ವಿಂಗಡಣೆ ಸಹಾಯಕ:- 10 ಹುದ್ದೆಗಳು
ಅರ್ಜಿ ಸಲ್ಲಿಸಲು ವಿಧಾನ:- ಆಫ್ಲೈನ್ ಮೂಲಕ
ಅರ್ಜಿ ಪ್ರಾರಂಭ ದಿನಾಂಕ:- 09/06/2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:- 02/07/2025
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಕರ್ನಾಟಕ ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಮತ್ತು ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವಯೋಮಿತಿ ಎಷ್ಟು:- ಕರ್ನಾಟಕ ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ 129 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ 27 ವರ್ಷ ನಿಗದಿ ಮಾಡಿದೆ ಹಾಗೂ ಮೀಸಲಾತಿ ಆಧಾರದ ಮೇಲೆ ಅರ್ಜಿದಾರರಿಗೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅತಿ ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಸಂಬಳ ಎಷ್ಟು:– ಕರ್ನಾಟಕ ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಈ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕನಿಷ್ಠ ತಿಂಗಳಿಗೆ ₹25,500/- ಯಿಂದ ಗರಿಷ್ಠ ₹81,000/- ವರೆಗೆ ಮಾಸಿಕ ವೇತನ ಅಥವಾ ಸಂಬಳ ನೀಡಲಾಗುತ್ತದೆ ಇದರ ಜೊತೆಗೆ ಇತರ ಸರಕಾರಿ ಭತ್ಯೆ ಮತ್ತು ಸವಲತ್ತುಗಳು ಲಭ್ಯವಿರುತ್ತವೆ
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಕರ್ನಾಟಕ ಅಂಚೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಓದಿಕೊಳ್ಳಿ ನಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಧಿಕೃತ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಿ ಕೆಳಗಡೆ ನೀಡಿದ ವಿಳಾಸಗಳಿಗೆ ಅಂಚೆಯ ಮೂಲಕ ಕಳಿಸಬೇಕು
ಅರ್ಜಿ ಕಳಿಸಲು ಬೇಕಾಗುವ ವಿಳಾಸದ ವಿವರಗಳು..?
ಪೋಸ್ಟ್ ಮಾಸ್ಟರ್ ಜನರಲ್, ಉತ್ತರ ಕರ್ನಾಟಕ ಪ್ರದೇಶ, ಧಾರವಾಡ 580001
ಪೋಸ್ಟ್ ಮಾಸ್ಟರ್ ಜನರಲ್, ದಕ್ಷಿಣ ಕರ್ನಾಟಕ ಪ್ರದೇಶ, ಬೆಂಗಳೂರು 560001
ಪೋಸ್ಟ್ ಮಾಸ್ಟರ್ ಜನರಲ್, ಬೆಂಗಳೂರು ಪ್ರಧಾನ ಕಚೇರಿ, ಬೆಂಗಳೂರು 560001
ಜಿಎಂ (PM & FP), ಬೆಂಗಳೂರು JPO ಕಟ್ಟಡ, ಬೆಂಗಳೂರು 560001
ಅಧಿಕಾರಿ ಉಸ್ತುವಾರಿ,
P & T ಆಡಳಿತ ಘಟಕ, APS ವಿಂಗ್,
ಬ್ರಿಗೇ ಡಿಯರ್ ಆಫ್ ದಿ ಗಾಡ್ಸ್,
ಪೋಸ್ಟ್ ಕೋಡ್:- 900746, C/O 56 APO,
ಬೆಂಗಳೂರು:- 560001