PM-Kisan 20Th Installment: ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆ 2000 ಹಣ ಈ ದಿನ ಬಿಡುಗಡೆ, ಈ ರೀತಿ ನಿಮ್ಮ ಹೆಸರು ಚೆಕ್ ಮಾಡಿ
ನಮ್ಮ ಭಾರತ ದೇಶದಲ್ಲಿ ರೈತರಿಗಾಗಿ ಜಾರಿಗೆ ತಂದಿರುವ ಅತ್ಯಂತ ದೊಡ್ಡ ಯೋಜನೆ ಎಂದರೆ ಅದು ಪಿಎಂ ಕಿಸಾನ್ ಯೋಜನೆ ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರ ಖಾತೆಗೆ ಪ್ರತಿ ವರ್ಷಕ್ಕೆ ₹6,000 ರೂಪಾಯಿಯಂತೆ 3 ಕಂತಿನ ರೂಪದಲ್ಲಿ ಪ್ರತಿ ಕಂತಿಗೆ ರೂ.2000 ಯಂತೆ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿವರೆಗೂ ರೈತರಿಗೆ ಸುಮಾರು 19 ಕಂತಿನ ಹಣ ಜಮಾ ಮಾಡಲಾಗಿದೆ
ಆದ್ದರಿಂದ ತುಂಬಾ ರೈತರು ಇದೀಗ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಬಹುದು ಎಂದು ಎದುರು ನೋಡುತ್ತಿದ್ದಾರೆ ಅಂತವರಿಗೆ ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು ಸ್ನೇಹಿತರೆ (Article) ಈ ಒಂದು ಲೇಖನಿಯ ಮೂಲಕ (PM-Kisan) ಪಿಎಂ ಕಿಸಾನ್ ರೂ.2000 ಹಣ (money release) ಯಾವಾಗ ಬಿಡುಗಡೆಯಾಗುತ್ತೆ ಹಾಗೂ (Money transfer) ಹಣ ಪಡೆಯಲು ರೈತರು (former) ಕಡ್ಡಾಯವಾಗಿ ಯಾವ (eligibility) ಕೆಲಸ ಮಾಡಬೇಕು ಎಂಬ ಮಾಹಿತಿಯನ್ನು (information) ತಿಳಿಯೋಣ ಹಾಗಾಗಿ (Share) ಈ ಲೇಖನವನ್ನು ನೀವು ಆದಷ್ಟು ರೈತರಿಗೆ ಶೇರ್ ಮಾಡಿ
ಪಿಎಂ ಕಿಸಾನ್ ಯೋಜನೆ (PM-Kisan 20Th Installment).?
ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಸನ್ಮಾನ್ಯಧಿ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆ ಮೂಲಕ ರೈತರಿಗೆ ಉಪಯುಕ್ತ ಸಮಯದಲ್ಲಿ ಅಂದರೆ ಬಿತ್ತನೆ ಮಾಡುವ ಸಮಯದಲ್ಲಿ ಹಾಗೂ ರಸಗೊಬ್ಬರ ಚೆಲುವ ಸಂದರ್ಭದಲ್ಲಿ ಮತ್ತು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಉಪಯೋಗವಾಗುವಂತೆ, ಮೂರು ಕಂತಿನ ರೂಪದಲ್ಲಿ ವರ್ಷಕ್ಕೆ ಆರು ಸಾವಿರ ಹಣವನ್ನು ಪ್ರತಿ ಕಂತಿಗೆ 2000 ಅಂತೆ. ಈ ಒಂದು ಯೋಜನೆಯ ಮೂಲಕ ವರ್ಗಾವಣೆ ಮಾಡುತ್ತಿದೆ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವು ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ ಮತ್ತು ಈ ಯೋಜನೆ ಅಡಿಯಲ್ಲಿ ಇಲ್ಲಿವರೆಗೂ ರೈತರಿಗೆ ಸುಮಾರು 19 ಕಂತಿನ ಅಂದರೆ 38,000 ವರೆಗೆ ರೈತರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗಾಗಿ ಇದೀಗ 20ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ರೈತರು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವಾಲಯದಿಂದ ಇದೀಗ ಹೊಸ ಮಾಹಿತಿ ಬಂದಿದೆ
ಪಿಎಂ ಕಿಸಾನ್ ₹2000 ಕಂತು ಬಿಡುಗಡೆಯ ತಿಂಗಳುಗಳು..?
ಹೌದು ಸ್ನೇಹಿತರೆ ಸಾಮಾನ್ಯವಾಗಿ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ರೈತರಿಗೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷಕ್ಕೆ ₹6000 ರೂಪಾಯಿ ಅಂದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2,000 ರೂಪಾಯಿ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾ ಬಂದಿದೆ ಈ ಹಣ ಈ ಕೆಳಗೆ ತಿಳಿಸಲಾದ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ
- ಮೊದಲ ಕಂತು ರೂ. 2000 :- ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆ
- ಎರಡನೇ ಕಂತು ರೂ. 2000:- ಅಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ
- ಮೂರನೇ ಕಂತು ರೂ. 2000:- ಡಿಸೆಂಬರ್ ಮತ್ತು ಮಾರ್ಚ್ ತಿಂಗಳ ನಡುವೆ ಬಿಡುಗಡೆ
20ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯನ್ನು 2019ನೇ ವರ್ಷದಲ್ಲಿ ಈ ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆ ಜಾರಿಗೆ ಬಂದ ನಂತರ ರೈತರು ಇಲ್ಲಿವರೆಗೂ ಸುಮಾರು 19 ಕಂತಿನವರೆಗೆ ಹಣ ಪಡೆದುಕೊಂಡಿದ್ದಾರೆ ಮತ್ತು ಈ ಒಂದು 19ನೇ ಕಂತಿನ ಕಳೆದ ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಮಾಡಲಾಯಿತು. ಇದೀಗ 20ನೇ ಕಂತಿನ ಹಣ ಯಾವಾಗ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಇದೀಗ ಹೊಸ ಮಾಹಿತಿ ವರ ಬಂದಿದ್ದು ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ 20ನೇ ಕಂತಿನ 2000 ಹಣವನ್ನು ಜೂನ್ ತಿಂಗಳ ಅಂತ್ಯದ ಒಳಗಡೆ ಅಥವಾ ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ರೈತರು ಹಣ ಪಡಿಯಲು ತಪ್ಪದೆ ಈ ಕೆಲಸ ಮಾಡಿ..?
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ಪಡೆಯಲು ಬಯಸುವಂತಹ ರೈತರು ಕಡ್ಡಾಯವಾಗಿ ಕೆಲವೊಂದು ಅರ್ಹತೆಗಳನ್ನು ಮತ್ತು ಷರತ್ತುಗಳನ್ನು ಪೂರೈಸಿರಬೇಕು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
E-kyc ಪೂರ್ಣಗೊಂಡಿರಬೇಕು:- ರೈತರು ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಕಡ್ಡಾಯವಾಗಿ ರೈತರು ತಮ್ಮ ಅರ್ಜಿಯ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು
ಆಧಾರ್ ಜೋಡಣೆ:- ರೈತರು ಪಿ ಎಮ್ ಕಿಸಾನ್ 20ನೇ ಕಂತಿನ ಹಣ ಪಡೆಯಲು ರೈತರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿರಬೇಕು ಇದರ ಜೊತೆಗೆ ಆಧಾರ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವ ವ್ಯವಸ್ತೆ ಅಂದರೆ NPCI ಮ್ಯಾಪಿಂಗ್ ಮಾಡಿಸಿರಬೇಕು
ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು:- ಪಿಎಂ ಕಿಸನ್ ಯೋಜನೆ ಅಡಿಯಲ್ಲಿ ಹಣ ಪಡೆಯಲು ಬಯಸುವ ರೈತರ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಅಂದರೆ ಜಮೀನು ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸಿದ ರೈತರ ದಾಖಲಾತಿ ಹೆಸರು ಇತರ ಅನೇಕ ಮಾಹಿತಿಗಳು ಒಂದಾಣಿಕೆ ಆಗುತ್ತಿರಬೇಕು
ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬಂದಿದೆ ಎಂದು ಚೆಕ್ ಮಾಡುವುದು ಹೇಗೆ..?
ರೈತರು ಇಲ್ಲಿವರೆಗೂ ಎಷ್ಟು ಕಂತಿನ ಹಣ ಜಮಾ ಆಗಿದೆ ಅಥವಾ ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆ ಹಣ ಬಂದಿದೆಯ ಎಂಬ ಮಾಹಿತಿಯನ್ನು ನೀವು ಚೆಕ್ ಮಾಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿ ಮತ್ತು ಗ್ರಾಮ ಮುಂತಾದ ವಿವರಗಳನ್ನು ನಮೂದಿಸಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿ ಖಚಿತ ಪಡಿಸಿಕೊಳ್ಳಿ ಮತ್ತು 20ನೇ ಕಂತಿನ ಜಮಾ ಆಗುತ್ತೆ ಎಂಬ ಮಾಹಿತಿ ಕೂಡ ನೀವು ಈ ಜಾಲತಾಣದಲ್ಲಿ ತಿಳಿದುಕೊಳ್ಳಬಹುದು
Karnataka Weather: ಬಂತು ಹೊಸ ಅಪ್ಡೇಟ್ ಜೂನ್ 29 ರವರೆಗೆ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ! ಇಲ್ಲಿದೆ ವಿವರ