PM kisan 20Ne Kanthu: ಪಿಎಂ ಕಿಸಾನ್ 20ನೇ ಕಂತಿನ ಹಣ ರೂ.2000 ದಿನ ಜಮಾ ಆಗುತ್ತದೆ ಇಲ್ಲಿದೆ ವಿವರ
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ 20ನೇ ಕಂತಿನ ಹಣ ರೂ.2000 ಯಾವಾಗ ಬಿಡುಗಡೆಯಾಗುತ್ತದೆ ಎಂದು ರೈತರು ತುಂಬಾ ದಿನದಿಂದ ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೀಗ ಹೊಸ ಮಾಹಿತಿ ನೀಡಿದೆ, ಹೌದು ಸ್ನೇಹಿತರೆ ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ ಹಾಗಾಗಿ ರೈತರು ಈ ಒಂದು ಯೋಜನೆಯ ಮೂಲಕ 2000 ಪಡೆದುಕೊಳ್ಳಲು ಬಯಸುತ್ತಿದ್ದರೆ ಕಡ್ಡಾಯವಾಗಿ ಕೆಲವೊಂದು ಕೆಲಸ ಮಾಡಬೇಕು ಹಾಗೂ ಅರ್ಹತೆ ಹೊಂದಿರಬೇಕು
ಆದ್ದರಿಂದ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ 2000 ಹಣ ಪಡೆದುಕೊಳ್ಳಲು ಬಯಸುವ ರೈತರು ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನೆಯನ್ನು ನೀವು ಆದಷ್ಟು ರೈತರಿಗೆ ಶೇರ್ ಮಾಡಿ..
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ..?
ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2019ನೇ ವರ್ಷದಲ್ಲಿ ಪಿಎಂ ಕಿಸಾನ್ ಅಥವಾ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ ಮತ್ತು ಈ ಒಂದು ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದಂತ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6000 ಹಣವನ್ನು ಮೂರು ಕಂತಿನ ರೂಪದಲ್ಲಿ ನೇರವಾಗಿ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ

ಇದರಿಂದ ರೈತರು ತಮ್ಮ ಬೆಳೆ ಬಿತ್ತನೆ ಸಂದರ್ಭದಲ್ಲಿ ಹಾಗೂ ಬೆಳೆ ಕಟಾವು ಸಂದರ್ಭದಲ್ಲಿ ಮತ್ತು ಬೆಳೆಗಳಿಗೆ ರಸಗೊಬ್ಬರ ಹಾಕುವ ಸಂದರ್ಭದಲ್ಲಿ ರೈತರ ಖಾತೆಗೆ ನೇರವಾಗಿ ಮೂರು ಕಂತಿನ ರೂಪದಲ್ಲಿ ಅಂದರೆ ಜೂನ್-ಅಗಸ್ಟ್ ಮದ್ಯದಲ್ಲಿ ಒಂದು ಕಂತು ಹಾಗೂ ನವೆಂಬರ್ ಮತ್ತು ಜನವರಿ ತಿಂಗಳ ಮಧ್ಯದಲ್ಲಿ ಒಂದು ಕಂತು ಹಾಗೂ ಏಪ್ರಿಲ್ ಮತ್ತು ಮೇ ತಿಂಗಳ ನಡುವಿನಲ್ಲಿ ಒಂದು ಕಂತು ಈ ರೀತಿ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ರೈತರ ಖಾತೆಗೆ ರೂ. 2000 ಹಣವನ್ನು ವರ್ಗಾವಣೆ ಮಾಡುತ್ತಾ ಬರಲಾಗಿದೆ
ಇಲ್ಲಿವರೆಗೂ ರೈತರು ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿಯಲ್ಲಿ ಸುಮಾರು 19 ಕಂತಿನ ಹಣ ಅಂದರೆ 38,000 ವರೆಗೆ ಈ ಯೋಜನೆಯ ಮೂಲಕ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗಾಗಿ 20ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಯಾವಾಗ ಆಗುತ್ತೆ ಎಂದು ಎದುರು ನೋಡುತ್ತಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ನೀಡಲಾಗಿದೆ
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ 20ನೇ ಕಂತಿನ ಹಣ ಯಾವಾಗ ಬಿಡುಗಡೆ..?
ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಮೂಲಕ ರೈತರು 19ನೇ ಕಂತಿನ ಹಣ ಪಡೆದುಕೊಂಡಿದ್ದಾರೆ ಇದೀಗ 20ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ ಆದರೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಪಿಎಂ ಕಿಸಾನ್ 20ನೇ ಕಂತಿನ ಹಣ ಜೂನ್ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ
ಹೌದು ಸ್ನೇಹಿತರೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರ್ ರಾಜ್ಯದಲ್ಲಿ ನಡೆದ ಸಮಾರಂಭಗಳಲ್ಲಿ ಮಾತನಾಡುವ ಸಂದರ್ಭದಲ್ಲಿ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿದ್ದಾರೆ, ಅವರು ತಿಳಿಸಿರುವ ಮಾಹಿತಿ ಪ್ರಕಾರ ಈ ಒಂದು ಯೋಜನೆಯ 20ನೇ ಕಂತಿನ ಹಣ ರೂ.2,000 ಜೂನ್ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಬಿಡುಗಡೆ ಮಾಡುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ
ಆದ್ದರಿಂದ ಪಿಎಂ ಕಿಸಾನ್ ಯೋಜನೆ ಹಣ ಪಡೆಯಲು ರೈತರು ಕಡ್ಡಾಯವಾಗಿ ಕೆಲವೊಂದು ಹೊಸ ರೂಲ್ಸ್ ಪಾಲಿಸಬೇಕು ಇದಕ್ಕೆ ಸಂಬಂಧಿಸಿ ದಂತ ಮಾಹಿತಿ ನಾವು ಕೆಳಗಡೆ ನೀಡಿದ್ದೇವೆ
ಪಿಎಂ ಕಿಸಾನ್ 2000 ಹಣ ಪಡೆಯಲು ಇರುವ ರೂಲ್ಸ್..?
e-kyc ಕಡ್ಡಾಯವಾಗಿ ಮಾಡಬೇಕು:- ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು ಯಾವುದೇ ಕಂತಿನ ಹಣ ಪಡೆಯಲು ಬಯಸುತ್ತಿದ್ದರೆ ಮೊದಲು ರೈತರು ತಮ್ಮ ಅರ್ಜಿಯ ekyc ಪ್ರಕ್ರಿಯೆ ಪೂರ್ಣಗೊಳಿಸಿರಬೇಕು ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ekyc ಮಾಡಿಸಿರಬೇಕು ಹಾಗಾಗಿ ನೀವು ಈ ಎಲ್ಲಾ ಕೆಲಸ ಮಾಡಿದರೆ ನಿಮಗೆ ಹಣ ಸಿಗುತ್ತೆ ಒಂದು ವೇಳೆ ಮಾಡಿಲ್ಲ ಬಂದರೆ ಕೂಡ ನೀವು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರ ಅಥವಾ ಸ್ಥಳೀಯ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ
ಬ್ಯಾಂಕ್ ಖಾತೆ ಸರಿಪಡಿಸಿ:- ಪಿಎಂ ಕಿಸಾನ್ ಯೋಜನೆ ಹಣ ಪಡಿಯಲು ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ NPCI ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ನೀವು ಈ ಕೆಲಸ ಮಾಡಿದ್ದೀರಾ ಇಲ್ಲವೇ ಎಂಬ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ ಒಂದು ವೇಳೆ ನೀವು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಒಂದರ ಕೂಡಲೇ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಿ
ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ..?
ಹೌದು ಸ್ನೇಹಿತರೆ ನೀವು ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಬಿಡುಗಡೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಏಕೆಂದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಖಂಡಿತ ಹೋಗಲು ನಿಮಗೆ 20ನೇ ಕಂತಿನ ಹಣ ಜಮಾ ಆಗುತ್ತೆ
ಹಾಗಾಗಿ ನೀವು https://pmkisan.gov.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೀವು (benefiary Status) ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್ ಎಂಟರ್ ಮಾಡಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಒಂದು ವೇಳೆ ನಿಮ್ಮ ಹೆಸರು ಇಲ್ಲವಾದರೆ ಅಲ್ಲಿ ಯಾವ ತೊಂದರೆಯಿಂದ ನಿಮ್ಮ ಹೆಸರು ಕೈ ಬಿಡಲಾಗಿದೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ ಅಥವಾ ಯಾವ ಕಾರಣಕ್ಕೆ ನಿಮಗೆ ಹಣ ಜಮಾ ಆಗುವುದಿಲ್ಲ ಎಂಬ ಮಾಹಿತಿ ನೋಡಲು ಸಿಗುತ್ತದೆ
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪ್ರತಿದಿನ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ! ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು.? ಇಲ್ಲಿದೆ ನೋಡಿ ವಿವರ