ಹೊಸ ರೇಷನ್ ಕಾರ್ಡ್: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ಈ ದಾಖಲೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ

ಹೊಸ ರೇಷನ್ ಕಾರ್ಡ್: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ಈ ದಾಖಲೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ

ಇವತ್ತಿನ ದಿನ ರೇಷನ್ ಕಾರ್ಡ್ ಎಂಬುದು ಒಂದು ಅತ್ಯಂತ ಮುಖ್ಯ ದಾಖಲಾತಿಯಾಗಿದೆ, ಆದ್ದರಿಂದ ತುಂಬಾ ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಲು ಅಥವಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ನಮ್ಮ ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಆದರೆ ಅರ್ಜಿ ಸಲ್ಲಿಸಲು ಬಯಸುವಂಥ ಅರ್ಜಿದಾರರು ಕಡ್ಡಾಯವಾಗಿ ಈ ಒಂದು ದಾಖಲಾತಿ ಹೊಂದಿರಬೇಕು ಅಂದರೆ ಮಾತ್ರ ಹೊಸ ರೇಷನ್ ಕಾರ್ಡ್ ಅಥವಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ

ಹಾಗಾಗಿ ನಾವು ಈ ಒಂದು ಲೇಖನೆಯ ಮೂಲಕ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಯಾವ ದಾಖಲಾತಿ ಬೇಕು ಹಾಗು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಮತ್ತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ಆದಷ್ಟು ನೀವು ಈ ಲೇಖನಿಯನ್ನು ರೇಷನ್ ಕಾರ್ಡ್ ಇಲ್ಲದಂತ ಕುಟುಂಬದವರಿಗೆ ಶೇರ್ ಮಾಡಿ

 

ಹೊಸ ರೇಷನ್ ಕಾರ್ಡ್..?

ಹೌದು ಸ್ನೇಹಿತರೆ ಇವತ್ತು ನಮ್ಮ ಕರ್ನಾಟಕದ ಯಾವುದೇ ಯೋಜನೆಯ ಸೌಲಭ್ಯ ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತಹ ಗ್ಯಾರೆಂಟಿ ಯೋಜನೆಗಳ ಲಾಭ ಪಡೆಯಬೇಕು ಅಂದರೆ ಕಡ್ಡಾಯವಾಗಿ ಆ ಒಂದು ಕುಟುಂಬ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಹೊಂದಿರಬೇಕು ಅಂದರೆ ಮಾತ್ರ ಎಲ್ಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಹೌದು ಸ್ನೇಹಿತರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಬೇಕು ಅಂದರೂ ಕೂಡ ಕಡ್ಡಾಯವಾಗಿ ಫಲಾನುಭವಿಗಳು ಪಡಿತರ ಚೀಟಿ ಹೊಂದಿರಬೇಕು

ಹೊಸ ರೇಷನ್ ಕಾರ್ಡ್
ಹೊಸ ರೇಷನ್ ಕಾರ್ಡ್

 

ಇಂದು ಪಡಿತರ ಚೀಟಿ ಹೊಂದಿದವರಿಗೆ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಉಚಿತವಾಗಿ ಪ್ರತಿ ತಿಂಗಳು ಆಹಾರ ಸಾಮಗ್ರಿಗಳನ್ನು ನ್ಯಾಯಬೆಲೆ ಅಂಗಡಿಯ ಮೂಲಕ ವಿತರಣೆ ಮಾಡಲಾಗುತ್ತಿದೆ ಹಾಗಾಗಿ ಈ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಒಂದು ಅತ್ಯಗತ್ಯವಾಗಿದೆ ಹಾಗಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ತುಂಬಾ ಜನರು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ

 

WhatsApp Group Join Now
Telegram Group Join Now       

ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..?

ಕರ್ನಾಟಕ ರಾಜ್ಯ ಸರ್ಕಾರ ಇದೀಗ ನಮ್ಮ ರಾಜ್ಯದ ಜನತೆಗೆ ಹೊಸ ಪಡಿತರ ಚೀಟಿ ಅಥವಾ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.! ಆದ್ದರಿಂದ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ದಿನಾಂಕ 30 ಜೂನ್ 2025 ಒಳಗಡೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.! ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಕಡ್ಡಾಯವಾಗಿ ಇ ಶ್ರಮ ಕಾರ್ಡ್ ಹೊಂದಿರಬೇಕು ಅಂದರೆ ಮಾತ್ರ ಪ್ರಸ್ತುತ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ

ಹೌದು ಸ್ನೇಹಿತರೆ ಇ ಶ್ರಮ ಕಾರ್ಡು ಹೊಂದಿದಂತ ಕುಟುಂಬಗಳಿಗೆ ಇದೀಗ ಹೊಸದಾಗಿ ಪಡಿತರ ಚೀಟಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನಿಮ್ಮ ಹತ್ತಿರ ಈ ಕಾರ್ಡ್ ಇದ್ದರೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಹೊಸ ಪಡಿತರ ಚೀಟಿ ಅಥವಾ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು

 

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು..?

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಇ ಶ್ರಮ ಕಾರ್ಡ್
  • ಮೊಬೈಲ್ ನಂಬರ್
  • ವಿಳಾಸದ ಪುರಾವೆಗಳು
  • ಇತರೆ ಅಗತ್ಯ ದಾಖಲಾತಿಗಳು

 

ಹೊಸ ರೇಷನ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳು..?

  • ಹೊಸ ಪಡಿತರ ಚೀಟಿ ಪಡೆಯಲು ಬಯಸುವ ಕುಟುಂಬಗಳು ಕಡ್ಡಾಯವಾಗಿ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಕಡಿಮೆ ಇರಬೇಕು
  • ಹೊಸ ಪಡಿತರ ಚೀಟಿ ಪಡೆಯಲು ಬಯಸುವಂತಹ ಅರ್ಜಿದಾರರು 7.5 ಎಕರೆಗಿಂತ ಕಡಿಮೆ ಭೂಮಿ ಹೊಂದಿರಬೇಕು
  • ಹೊಸ ಪಡಿತರ ಚೀಟಿ ಪಡೆಯಲು ಬಯಸುವ ಅರ್ಜಿದಾರರು ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ 100 ಚದರ್ ಮೀಟರ್ ಗಿಂತ ಕಡಿಮೆ ವಿಸ್ತೀರ್ಣದ ಜಾಗ ಅಥವಾ ಪ್ಲಾಟ್ ಹೊಂದಿರಬೇಕು
  • ಹೊಸ ರೇಷನ್ ಕಾರ್ಡ್ ಪಡೆಯಲು ಬಯಸುವ ಅರ್ಜಿದಾರರ ಕುಟುಂಬದಲ್ಲಿ ಯಾರು ಸರ್ಕಾರಿ ನೌಕರಿ ಹೊಂದಿರಬಾರದು

 

ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಅರ್ಜಿಗಳು ಯಾವಾಗ ಪ್ರಾರಂಭವಾಗುತ್ತದೆ ಈ ರೀತಿ ಪ್ರತಿದಿನ ಮಾಹಿತಿ ಪಡೆಯಲು ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಜೈನ್ ಆಗಬಹುದು

1 thought on “ಹೊಸ ರೇಷನ್ ಕಾರ್ಡ್: ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ, ಈ ದಾಖಲೆ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ”

Leave a Comment

?>