HDFC Scholarship 2025 Apply: ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ವರೆಗೆ ಸ್ಕಾಲರ್ಶಿಪ್! ಬೇಗ ಯೋಜನೆಗೆ ಅರ್ಜಿ ಸಲ್ಲಿಸಿ
ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಇದೀಗ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮೋ, ಐಟಿಐ, ವೈದ್ಯಕೀಯ ಮುಂತಾದ ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಮೂಲಕ ಬರೋಬ್ಬರಿ 75 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ
HDFC ಪರಿವರ್ತನಾ ಸ್ಕಾಲರ್ಶಿಪ್ ಅಂದರೆ ಏನು (HDFC Scholarship 2025 Apply).?
HDFC ಬ್ಯಾಕ್ ಸಂಸ್ಥೆ ತನ್ನ ಎಚ್ ಡಿ ಎಫ್ ಸಿ ಫೌಂಡೇಶನ್ ವತಿಯಿಂದ (ecss) ಕಾರ್ಯಕ್ರಮದ ಅಡಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ 75 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ

ಆದ್ದರಿಂದ ಆಸಕ್ತಿ ಇರುವ ವಿದ್ಯಾರ್ಥಿಗಳು ಎಚ್ ಡಿ ಎಫ್ ಸಿ ಪರಿವರ್ತನ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯಬಹುದು ಆದ್ದರಿಂದ ನಾವು ಈ ಲೇಖನಿಯಲ್ಲಿ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ
ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಎಷ್ಟು ಹಣ ಸಿಗುತ್ತೆ..?
- 1-6 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದರೆ ₹15,000/- ವರೆಗೆ ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಹೊಂದಿರುತ್ತಾರೆ
- 7-12 ನೇ ತರಗತಿವರೆಗೆ ಅಧ್ಯಯನ ಮಾಡುತ್ತಿದ್ದರೆ ₹18,000/- ವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಹೊಂದಿರುತ್ತಾರೆ
- ಪದವಿ ಅಧ್ಯಯನದ ವಿದ್ಯಾರ್ಥಿಗಳಿಗೆ ₹30,000/- ವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು
- ವೃತ್ತಿಪರ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ₹50,000/- ವರೆಗೆ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಮೂಲಕ ಆರ್ಥಿಕ ನಿರೂಪಣೆಯಬಹುದು
- ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ₹75,000/- ಎಚ್ ಡಿ ಎಫ್ ಸಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಹೊಂದಿರುತ್ತಾರೆ
ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
- ಎಚ್‌ಡಿಎಫ್‍ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ನಮ್ಮ ಭಾರತ ದೇಶದಲ್ಲಿ ವಾಸ ಮಾಡುತ್ತಿರಬೇಕು
- ಎಚ್‌ಡಿಎಫ್‍ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು (apply online) ಬಯಸುವ ವಿದ್ಯಾರ್ಥಿಗಳ (Scholarship) ಕುಟುಂಬದ ವಾರ್ಷಿಕ ಆದಾಯ 2,50,000 ಗಿಂತ (income) ಮೇಲೆ ಹೊಂದಿರಬಾರದು
- ಹೆಚ್ ಡಿ ಎಫ್ ಸಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಮಾತ್ರ ಅಧ್ಯಯನ ಮಾಡುತ್ತಿರಬೇಕು ಅಂದರೆ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ
- ಎಚ್ ಡಿ ಎಫ್ ಸಿ ವಿದ್ಯಾರ್ಥಿ ವೇತನಕ್ಕೆ ಪ್ರತಿ ವಿದ್ಯಾರ್ಥಿಗಳು ಅಂದರೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ
ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ..?
ಎಚ್ ಡಿ ಎಫ್ ಸಿ ವಿದ್ಯಾರ್ಥಿ ವೇತನ ಅಥವಾ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ನೀವು ಈ ಒಂದು ವಿದ್ಯಾರ್ಥಿ ವೇತನದ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಹಾಗಾಗಿ ನಾವು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಹಾಗೂ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://www.hdfcbankecss.com/
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.buddy4study.com/page/hdfc-bank-parivartans-ecss-programme
ಸ್ನೇಹಿತರೆ ಇದೇ ರೀತಿ ನಿಮಗೆ ವಿವಿಧ ಸ್ಕಾಲರ್ಶಿಪ್ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳುವುದರ ಮೂಲಕ ಪ್ರತಿಯೊಂದು ವಿಷಯದ ಬಗ್ಗೆ ಮೊದಲು ಮಾಹಿತಿ ಸಿಗುತ್ತದೆ