Free Sewing Machine: ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ! ಬೇಗ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಮಹಿಳೆಯರಿಗೆ ಸ್ವಹಲಂಬನೆ ಯಾಗಿ ಜೀವನ ನಡೆಸಲು ಹಲವಾರು ಯೋಜನೆಗಳನ್ನು ರೂಪಿಸಿದೆ ಅದೇ ರೀತಿ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಪ್ರಾರಂಭಿಸಲು ಮತ್ತು ಮಹಿಳೆಯರ ಆತ್ಮವಿಶ್ವಾಸ ಹೆಚ್ಚು ಮಾಡಲು ಮತ್ತು ಮಹಿಳೆಯರು ಸುಧಾರಿತ ಜೀವನ (life) ನಡೆಸಲು (karnataka) ಕರ್ನಾಟಕ ರಾಜ್ಯ ಸರ್ಕಾರ (government ) ಇದೀಗ ಮಹಿಳೆಯರಿಗಾಗಿ (free sewing machine) ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದೆ
ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರ ಇದೀಗ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತವಾಗಿ ಹೊಲಿಗೆ ಯಂತ್ರ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದರ ಜೊತೆಗೆ ಈ ಒಂದು ಹೊಲಿಗೆ ಯಂತ್ರ ಪಡೆಯಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಯೋಣ ಹಾಗಾಗಿ ಆದಷ್ಟು ಈ ಲೇಖನೆಯನ್ನು ಮಹಿಳೆಯರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing Machine).?
ಹೌದು ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಹಾಗೂ ಸ್ವಾಭಾವಿ ಜೀವನ ಮಾಡಲು ವಿವಿಧ ಇಲಾಖೆ ಹಾಗೂ ನಿಗಮದ ಅಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದೆ.! ಆದ್ದರಿಂದ ಮಹಿಳೆಯರು ಈ ಒಂದು ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗ ಅಥವಾ ಮನೆಯಲ್ಲಿ ಸಣ್ಣಪುಟ್ಟ ಉಡುಪುಗಳನ್ನು ತಯಾರಿಸಿ ಮಾರುವುದು ಮುಂತಾದ ಕೆಲಸವನ್ನು ಈ ಒಂದು ಹೊಲಿಗೆ ಯಂತ್ರ ಮೂಲಕ ಮಾಡಿ ಹಣ ಸಂಪಾದನೆ ಮಾಡಬಹುದು

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಇದೀಗ D. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಉಚಿತ ಹೊಲಿಗೆ ಯಂತ್ರವನ್ನು ಇದೀಗ ವಿತರಣೆ ಮಾಡುತ್ತಿದೆ ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಈ ಒಂದು ಯೋಜನೆಯ ಲಾಭ ಪಡೆಯಿರಿ. ಆದ್ದರಿಂದ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆ ಹೊಂದಿರಬೇಕು ಇದಕ್ಕೆ ಸಂಬಂಧಿಸಿದ ವಿವರ ಈಗ ತಿಳಿಯೋಣ
ಉಚಿತ ಹೊಲಿಗೆ ಯಂತ್ರ ಪಡೆಯಲು ಹೊಂದಿರಬೇಕಾದ ಅರ್ಹತೆಗಳು..?
ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ವಯಸ್ಸು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 55 ವರ್ಷದ ಒಳಗಿನವರು ಈ ಉಚಿತ ವಲಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ ಕನಿಷ್ಠ ₹98,000 ರಿಂದ 1.20 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಕಡ್ಡಾಯವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು ಅಂದರೆ ಪ್ರವರ್ಗ-1, 2A, 2B, 3A, 3B ಸೇರಿರಬೇಕು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಈ ಹಿಂದೆ ಉಚಿತ ಹೊಲಿಗೆ ಯಂತ್ರ ಯೋಜನೆ ಅಡಿಯಲ್ಲಿ ಲಾಭ ಪಡೆದಿರಬಾರದು
ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್ ಪ್ರತಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಎರಡು ಪಾಸ್ಪೋರ್ಟ್ ಸೈಜ್ ಫೋಟೋಸ್
- ವಿಳಾಸದ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ರೇಷನ್ ಕಾರ್ಡ್ ಅಥವಾ ವೋಟರ್ ಐಡಿ
- ಇತರೆ ಅಗತ್ಯ ದಾಖಲಾತಿಗಳು
ಉಚಿತ ಹೊಲಿಗೆ ಯಂತ್ರ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು..?
ಉಚಿತ ಹೊಲಿಗೆ ಯಂತ್ರ ಪಡೆಯಲು ಬಯಸುವಂತಹ ಮಹಿಳೆಯರು ಮೊದಲು ಈ ಮೇಲೆ ತಿಳಿಸಿದಂತೆ ಎಲ್ಲಾ ಅರ್ಹತೆಗಳು ನೀವು ಹೊಂದಿದ್ದರೆ ನೀವು ಕೂಡಲೇ ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಅಥವಾ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುವ ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಒಂದು ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು 30 ಜೂನ್ 2025 ದಿನಾಂಕದ ಒಳಗಡೆ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬೇಕು ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡಲೇ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಉಪಯುಕ್ತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಮತ್ತು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ನೀವು ಟೆಲಿಗ್ರಾಂ ಚಾನಲ್ ಗಳಿಗೆ ಜೈನ್ ಆಗುವುದರ ಮೂಲಕ ನಿಮಗೆ
ಪ್ರತಿದಿನ ಹೊಸ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು
2 thoughts on “Free Sewing Machine: ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ! ಬೇಗ ಅರ್ಜಿ ಸಲ್ಲಿಸಿ”