bele Vime 2025: ಮುಂಗಾರು ಮಳೆ ಬೆಳೆ ವಿಮೆ ಅರ್ಜಿ ಪ್ರಾರಂಭ, ರೈತರು ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಮುಂಗಾರು ಮಳೆ (bele vime) ಹಂಗಾಮಿನ ಬೆಳವೀಮೆಗೆ ಸರ್ಕಾರ (government) ರೈತರಿಂದ ಅರ್ಜಿ (apply online) ಆಹ್ವಾನ ಮಾಡಿದೆ ಹಾಗಾಗಿ ಆಸಕ್ತಿ ಇರುವಂತಹ ಕಡ್ಡಾಯವಾಗಿ (bele vime) ಬೆಳೆ ವಿಮೆ ಮಾಡಿಸಲು (apply) ಅರ್ಜಿ ಸಲ್ಲಿಸಿ, ಹೌದು ಸ್ನೇಹಿತರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ (Pradhan Mantri Fasal Bima Yojana) ಆಯೋಗದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಈ ವರ್ಷ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಇದರಿಂದ ರೈತರು ಪ್ರಕೃತಿ ವಿಕೋಪದಿಂದ ಹಾಗೂ ಅನಿರೀಕ್ಷಿತ ಘಟನೆ ಯಿಂದ ಬೆಳೆಗಳಿಗೆ ಹಾನಿ ಆದರೆ ಅಂಥ ಸಂದರ್ಭದಲ್ಲಿ ರೈತರು ಈ ಬೆಳೆ ವಿಮೆ ಮೂಲಕ ಪರಿಹಾರ ಹಣವನ್ನು ಸರಕಾರ ಕಡೆಯಿಂದ ಅಥವಾ ಭೀಮ ಕಂಪನಿ ಕಡೆಯಿಂದ ಪಡೆಯಲು ಅವಕಾಶ ಇರುತ್ತದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ,
ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಫಸಲು ಭೀಮಾ ಯೋಜನೆ ಅಂದರೆ ಏನು ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ರೈತರಿಗೆ ಎಷ್ಟು ಹಣ ಕಟ್ಟಬೇಕು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನಿಯನ್ನು ಆದಷ್ಟು ಕೊನೆಯವರೆಗೂ ಓದಿ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಂದರೆ ಏನು..?
ಸ್ನೇಹಿತರೆ ಕೇಂದ್ರ ಸರ್ಕಾರ ರೈತರಿಗಾಗಿ ಪ್ರದಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತ ರೈತರಿಗೆ ಪ್ರಕೃತಿ ವಿಕೋಪದಿಂದ ಹಾಗೂ ನೈಸರ್ಗಿಕ ಘಟನೆಗಳಿಂದ ಮತ್ತು ಮಳೆಯ ಕೊರತೆ ಹಾಗೂ ಪ್ರವಾಹದಿಂದ ಮತ್ತು ಇತರ ಅನೇಕ ಕಾರಣಗಳಿಂದ ಬೆಳೆ ನಷ್ಟ ಉಂಟಾದರೆ ಅಂತ ರೈತರಿಗೆ ಪರಿಹಾರ ನೀಡಲು ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹಾಗಾಗಿ ಪ್ರತಿಯೊಬ್ಬ ರೈತರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮುಖ್ಯ ಉದ್ದೇಶ..?
- ರೈತರಿಗೆ ಬೆಳೆ ಹಾನಿ ಆದಂತ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ
- ರೈತರಿಗೆ ಕೃಷಿ ಕ್ಷೇತ್ರದಲ್ಲಿ ಭದ್ರತೆ ಒದಗಿಸುವುದು ಹಾಗೂ ಮರು ಬಿತ್ತನೆಗೆ ಸಹಾಯ ಮಾಡುವುದು
- ಫಸಲ್ ಭೀಮಾ ಯೋಜನೆಯ ಮೂಲಕ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವುದು ಹಾಗೂ ರೈತರಿಗೆ ಸಾಲಭಾದೆಯಿಂದ ಮುಕ್ತಿ ಕಲ್ಪಿಸುವುದು
- ಮುಂಗಾರು ಹಾಗೂ ಮುಂಗಾರು ಎರಡು ಋತುವಿನಲ್ಲಿ ಬೆಳೆಗಳಿಗೆ ಹಾನಿ ಆದರೆ ಈ ಒಂದು ವೀಮಾ ಅಡಿಯಲ್ಲಿ ರಕ್ಷಣೆ ನೀಡುವುದು
ಮುಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಇದೀಗ ಒಟ್ಟು 36 ಅಧಿಸೂಚಿತ ಬೆಳೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ ಮಾಡಿದೆ ಅದರಲ್ಲಿ ನಾವು ಕೆಲವು ಪ್ರಮುಖ ಬೆಳೆಗಳ ವಿವರವನ್ನು ಹಾಗೂ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ನೀಡಿದ್ದೇವೆ
ಟೊಮೊಟೊ, ಎಳ್ಳು:- 30/06/2025
ನೆಲಗಡಲೆ, ಭತ್ತ, ಮುಸುಕಿನ ಜೋಳ, ರಾಗಿ, ತೊಗರಿ,ಸಜ್ಜೆ, ನವಣೆ:- 31/07/2025
ಸೂರ್ಯಕಾಂತಿ:- 16/07/2025
ಸ್ನೇಹಿತರ ಮೇಲೆ ನೀಡಿದ ಪ್ರಮುಖ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ವಿವರಗಳನ್ನು ನೀಡಿದ್ದೇವೆ ಹಾಗಾಗಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ www.samrakshane.karnataka.gov.in/ ಜಾಲತಾಣಕ್ಕೆ ಭೇಟಿ ನೀಡಿ
ಬೆಳೆ ವಿಮೆ ಮಾಡಿಸಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ರೈತರ ಆಧಾರ್ ಕಾರ್ಡ್
- ರೈತರ ಬ್ಯಾಂಕ್ ಪಾಸ್ ಬುಕ್
- ರೈತರ ಜಮೀನು ಪತ್ರ
- ಎರಡು ಪಾಸ್ಪೋರ್ಟ್ ಸೈಜ್ ಫೋಟೋಸ್
- ಮೊಬೈಲ್ ಸಂಖ್ಯೆ
- ಇತರೆ ಅಗತ್ಯ ದಾಖಲಾತಿಗಳು
ಬೆಳೆ ವಿಮೆ ಮಾಡಿಸಲು ಯಾವ ರೀತಿ ಅರ್ಜಿ ಸಲ್ಲಿಸಬೇಕು..?
ರೈತರು ಬೆಳೆ ವಿಮೆ ಮಾಡಿಸಲು ಸ್ವಂತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಅಥವಾ ಬ್ಯಾಂಕುಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಕೃಷಿ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಈ ಬೆಳೆ ವಿಮೆ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು ಹಾಗಾಗಿ ಬೇಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://www.samrakshane.karnataka.gov.in/
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಸಬ್ಸಿಡಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಇದರ ಜೊತೆಗೆ ಪ್ರಮುಖ ಸುದ್ದಿಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕಾದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ಗಳಿಗೆ ನೀವು ಜೈನ್ ಆಗಬಹುದು