Railway Recruitment 2025: SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ ಈ ರೀತಿ ಅಪ್ಲೈ ಮಾಡಿ

Railway Recruitment 2025: SSLC, ITI ಪಾಸಾದವರಿಗೆ ಸರ್ಕಾರಿ ಉದ್ಯೋಗ, ತಿಂಗಳಿಗೆ 29,200 ವರೆಗೆ ಸಂಬಳ ಈ ರೀತಿ ಅಪ್ಲೈ ಮಾಡಿ

ನಮಸ್ಕಾರ ಸ್ನೇಹಿತರೆ ನಿಮಗೆ ಸರ್ಕಾರಿ ಉದ್ಯೋಗ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್, ಹೌದು ಸ್ನೇಹಿತರೆ ಬೆಂಗಳೂರು ಮತ್ತು ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತೆ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜಸ್ಟ್ ನೀವು ಎಸ್ ಎಸ್ ಎಲ್ ಸಿ ಹಾಗೂ ಐಟಿಐ ಪಾಸಾದರೆ ಸಾಕು ಅರ್ಹತೆ ಪಡೆದುಕೊಳ್ಳುತ್ತೀರಿ.

ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಈ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಗ್ಗೆ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮತ್ತು ಈ ಹುದ್ದೆಗಳ ನೇಮಕಾತಿ ಕುರಿತು ನಾವು ಹೆಚ್ಚಿನ ಮಾಹಿತಿಯನ್ನು ಈ ಲೇಖನ ಮೂಲಕ ತಿಳಿದುಕೊಳ್ಳೋಣ

 

ರೈಲ್ವೆ ಇಲಾಖೆ ಹೊಸ ನೇಮಕಾತಿ (Railway Recruitment 2025).?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ರೈಲ್ವೆ ಇಲಾಖೆ ಅತಿ ಹೆಚ್ಚು ಜನರಿಗೆ ಕೆಲಸ ನೀಡುತ್ತಿದೆ ಇದೀಗ ಈ ಒಂದು ಇಲಾಖೆ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ನಮ್ಮ ಕರ್ನಾಟಕದಲ್ಲಿ ಹುಬ್ಬಳ್ಳಿ ಹಾಗೂ ಬೆಂಗಳೂರು ರೈಲ್ವೆ ನಿಗಮ ಹಾಗೂ ರೈಲ್ವೆ ಕಾರ್ಖಾನೆಗಳಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ

 

Railway Recruitment 2025
Railway Recruitment 2025

 

ಹೌದು ಸ್ನೇಹಿತರೆ ಈ ಒಂದು ಅಧಿಸೂಚನೆ ಪ್ರಕಾರ ಹುಬ್ಬಳ್ಳಿ (ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ) ಪ್ರಕಾರ ಸುಮಾರು 106 ಹುದ್ದೆಗಳು ಖಾಲಿ ಇವೆ. ಹಾಗೂ ಬೆಂಗಳೂರು ರೈಲು ಗಾಲಿ ತಯಾರಿಕೆ ಕಾರ್ಖಾನೆಯಲ್ಲಿ ಸುಮಾರು 36 ಹುದ್ದೆಗಳು ಖಾಲಿ ಇವೆ ಒಟ್ಟು 142 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅತಿ ಸೂಚನೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು

WhatsApp Group Join Now
Telegram Group Join Now       

 

ರೈಲ್ವೆ ಇಲಾಖೆ ಹುದ್ದೆಗಳ ನೇಮಕಾತಿ ವಿವರ (Railway Recruitment 2025).?

ನೇಮಕಾತಿ ಇಲಾಖೆ:- ರೈಲ್ವೆ ಇಲಾಖೆ

ಖಾಲಿ ಹುದ್ದೆಗಳ ಸಂಖ್ಯೆ:- 142 ಹುದ್ದೆಗಳು

ಹುದ್ದೆಗಳ ಹೆಸರು:- ಟೆಕ್ನಿಷಿಯನ್ ಗ್ರೇಡ್-1 & ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ

ಅರ್ಜಿ ಪ್ರಾರಂಭ ದಿನಾಂಕ:- ಶೀಘ್ರದಲ್ಲೇ

ಅರ್ಜಿ ಕೊನೆಯ ದಿನಾಂಕ:- ಶೀಘ್ರದಲ್ಲಿ ಪ್ರಾರಂಭ

 

ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Railway Recruitment 2025).?

ಹೌದು ಸ್ನೇಹಿತರೆ ಪ್ರಸ್ತುತ ರೈಲ್ವೆ ಇಲಾಖೆ, ನಮ್ಮ ಭಾರತ ದೇಶದಾದ್ಯಂತ ಸುಮಾರು 6180 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಮಾತ್ರ ಬಿಡುಗಡೆ ಮಾಡಿದೆ ಈ ಅಧಿಸೂಚನೆ ಪ್ರಕಾರ ನಮ್ಮ ಕರ್ನಾಟಕದಲ್ಲಿ ಒಟ್ಟು 142 ಹುದ್ದೆಗಳು ಖಾಲಿ ಇವೆ ಹಾಗಾಗಿ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ ಹಾಗಾಗಿ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಯೋಣ

ಶೈಕ್ಷಣಿಕ ಅರ್ಹತೆ:- ರೈಲ್ವೆ ಇಲಾಖೆ ಟೆಕ್ನಿಷಿಯನ್ ಗ್ರೇಡ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 10ನೇ ತರಗತಿ ಪಾಸ್ ಆಗಿರಬಹುದು ಇದರ ಜೊತೆಗೆ ಐಟಿಐ ಪಾಸಾದವರು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಐಟಿಐ ಜೊತೆಗೆ ಇತರ ಪದವಿ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಸಂಬಳ ಎಷ್ಟು:- ರೈಲ್ವೆ ಇಲಾಖೆ ಅಧಿಸೂಚನೆ ಪ್ರಕಾರ ಟೆಕ್ನಿಷಿಯನ್ ಗ್ರೇಡ್- ೧ ಹುದ್ದೆಗಳಿಗೆ ಆಯ್ಕೆಯಾದರೆ ಅಂತ ಅಭ್ಯರ್ಥಿಗಳಿಗೆ ಬರೋಬ್ಬರಿ ತಿಂಗಳಿಗೆ 29,200 ವರೆಗೆ ಸಂಬಳ ನೀಡಲಾಗುತ್ತದೆ ಹಾಗೂ ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಸುಮಾರು 19,900 ವರೆಗೆ ಸಂಬಳ ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿಕೊಳ್ಳಿ

ವಯೋಮಿತಿ ಎಷ್ಟು:- ರೈಲ್ವೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಹಾಗೂ ಗರಿಷ್ಠ 33 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ ಇದರ ಜೊತೆಗೆ ಅಭ್ಯರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿಕೊಳ್ಳಿ

 

ಈ ಹುದ್ದೆಗಳಿಗೆ ಅರ್ಜಿ (Railway Recruitment 2025) ಸಲ್ಲಿಸುವುದು ಹೇಗೆ.?

ಸ್ನೇಹಿತರ ಪ್ರಸ್ತುತ ರೈಲ್ವೆ ಇಲಾಖೆ, ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಮಾತ್ರ ಬಿಡುಗಡೆ ಮಾಡಿದೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೀಘ್ರವೇ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ತಿಳಿಸಿದೆ ಹಾಗಾಗಿ ನಾವು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಪ್ರಾರಂಭವಾದ ತಕ್ಷಣ ನಾವು ಇನ್ನೊಂದು ಲೇಖನ ಮೂಲಕ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಅಲ್ಲಿವರೆಗೂ ಈ ಹುದ್ದೆಗಳಿಗೆ ತಯಾರಿ ಮಾಡಿಕೊಳ್ಳಿ

ಸ್ನೇಹಿತರೆ ನಿಮಗೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಇದರ ಜೊತೆಗೆ ಪ್ರತಿದಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಹಾಗೂ ವಿದ್ಯಾರ್ಥಿ ವೇತನಗಳ ಕುರಿತು ಮಾಹಿತಿ ಪಡೆಯಲು

ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ನೀವು ಸೇರಿಕೊಳ್ಳುವುದರಿಂದ ಪ್ರತಿದಿನ ಹೊಸ ಮಾಹಿತಿ ಸಿಗುತ್ತದೆ

Gold Rate Drops Today : ಇಂದು ಕರ್ನಾಟಕದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ! ಇಂದಿನ ಚಿನ್ನದ ದರ ಎಷ್ಟು.?

Leave a Comment

?>