Ration Cards News: ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಲ್ಲಿ ರಾಗಿ, ಜೋಳ ಮತ್ತು ಇತರ ದವಸ ಧಾನ್ಯಗಳು ವಿತರಣೆ
ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜೊತೆಗೂಡಿ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ರಾಜ್ಯದ ಜನತೆಗೆ ಇದೀಗ ಅಕ್ಕಿ ಜೋಳ ಮತ್ತು ಇತರ ದವಸ ಧಾನ್ಯಗಳ ವಿತರಣೆ ಮಾಡಲು ರಾಜ್ಯ ಸರ್ಕಾರ ಇದೀಗ ಆದೇಶ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಯಾವ ರೇಷನ್ ಕಾರ್ಡ್ ಹೊಂದಿದವರಿಗೆ ಎಷ್ಟು ಅಕ್ಕಿ ಮತ್ತು ಜೋಳ ಹಾಗೂ ರಾಗಿ ಇತರ ವಸ್ತುಗಳು ವಿತರಣೆ ಮಾಡಲಾಗುತ್ತದೆ ಮತ್ತು ಯಾವುದೇ ಸಮಸ್ಯೆಯಾದರೆ ಯಾರಿಗೆ ಕಾಂಟಾಕ್ಟ್ ಮಾಡಬೇಕು ಎಂಬ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿಯೋಣ
ಹೌದು ಸ್ನೇಹಿತರೆ, ರೇಷನ್ ಕಾರ್ಡ್ ಹೊಂದಿದವರು ಇಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಹಾಗೂ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಇದೀಗ ಅಕ್ಕಿ ಮಾತ್ರ ವಿತರಣೆ ಮಾಡಲಾಗುತ್ತಿತ್ತು ಆದರೆ ಇದೀಗ ರಾಜ್ಯ ಸರ್ಕಾರ ಅಕ್ಕಿಯ ಜೊತೆಗೆ ರಾಜ್ಯದ ಜನತೆಗೆ ಅವಶ್ಯಕತೆ ಇರುವಂತ ರಾಗಿ ಮತ್ತು ಜೋಳ ವಿತರಣೆ ಮಾಡಲು ನಿರ್ಧಾರ ಮಾಡಿದೆ. ನಿರ್ಧಾರ ಮಾಡುವುದಷ್ಟೇ ಅಲ್ಲದೆ ಜೂನ್ ತಿಂಗಳಿನಿಂದಲೇ ವಿತರಣೆ ಮಾಡಲು ಆದೇಶ ಕೂಡ ಮಾಡಿದೆ
ಅಕ್ಕಿ ಜೊತೆಗೆ ರಾಗಿ, ಜೋಳ, ಗೋಧಿ ವಿತರಣೆ ಮಾಡಲು ನಿರ್ಧಾರ..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಇದೀಗ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರ ಕಡೆಯಿಂದ ನೀಡುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಇನ್ನು 10 ಕೆಜಿ ಅಕ್ಕಿ ಸೇರಿಸಿ ರಾಜ್ಯದ ಜನತೆಗೆ ಒಟ್ಟು ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಇದೀಗ ವಿತರಣೆ ಮಾಡಲಾಗುತ್ತಿದೆ. ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು ಮತ್ತು ಈ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗಡೆ ಪೂರೈಸುವುದಾಗಿ ಭರವಸೆ ಕೂಡ ಜನರಿಗೆ ನೀಡಿತ್ತು

ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಮತ್ತು ಬಂದ ನಂತರ 100 ದಿನಗಳ ಒಳಗಡೆ ಆಗಿ ತನ್ನ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವನಿಧಿ ಯೋಜನೆ ಮತ್ತು ಶಕ್ತಿ ಯೋಜನೆ ಜಾರಿಗೆ ತಂದಿದೆ.!
ಇದೀಗ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ ಅಕ್ಕಿ ನೀಡುವುದಾಗಿ ಬರವಸೆ ನೀಡಿದ್ದು ಅದೇ ರೀತಿ ಕಳೆದ ಎರಡು ತಿಂಗಳಿಂದ 10 ಕೆ.ಜಿ ಅಕ್ಕಿ ವಿತರಣೆ ಮಾಡಲಾಗಿದೆ.! ಆದರೆ ರಾಜ್ಯ ಸರ್ಕಾರ ಇದೀಗ 10 ಕೆ.ಜಿ ಅಕ್ಕಿಯ ಬದಲಾಗಿ ಜನರಿಗೆ ಅವಶ್ಯಕತೆಯೇ ತಕ್ಕಂತೆ ಅಕ್ಕಿಯ ಜೊತೆಗೆ ರಾಗಿ, ಜೋಳ, ಮತ್ತು ಗೋಧಿ ಮುಂತಾದವಸ ಧಾನ್ಯಗಳನ್ನು ಪ್ರಾಂತಗಳ ಅನುಗುಣವಾಗಿ ವಿತರಣೆ ಮಾಡಲು ರಾಜ್ಯ ಸರ್ಕಾರ ಇದೀಗ ಖಡಕ್ಕಾಗಿ ಆದೇಶ ಮಾಡಿದೆ
ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಈ ತಿಂಗಳಿನಿಂದಲೇ ಅಂದರೆ ಜೂನ್ ತಿಂಗಳಿನಿಂದಲೇ ವಿವಿಧ ಪ್ರದೇಶಗಳಲ್ಲಿ ಇದೀಗ ಅಕ್ಕಿ ಜೊತೆಗೆ ರಾಗಿ ಮತ್ತು ಗೋಧಿ ಹಾಗೂ ಜೋಳ ಮುಂತಾದ ದವಸ ಧಾನ್ಯಗಳನ್ನು ಪ್ರಾಂತಗಳ ಅನುಗುಣವಾಗಿ ವಿತರಣೆ ಮಾಡಲು ಪ್ರಾರಂಭ ಮಾಡಿದೆ ಹಾಗಾಗಿ ಯಾವ ರೇಷನ್ ಕಾರ್ಡ್ ಇದ್ದವರಿಗೆ ಎಷ್ಟು ಅಕ್ಕಿ ಮತ್ತು ಜೋಳ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ವಿವಿಧ ರೇಷನ್ ಕಾರ್ಡ್ ಇದ್ದವರಿಗೆ ವಿವಿಧ ರೀತಿ ಪಡಿತರ ವಿತರಣೆ..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ರೇಷನ್ ಕಾರ್ಡ್ ನಲ್ಲಿ ಎರಡು ಮೂರು ವಿಧಗಳು ಇವೆ. ಹಾಗಾಗಿ ರೇಷನ್ ಕಾರ್ಡ್ ಅನುಗುಣವಾಗಿ ಸದಸ್ಯರಿಗೆ ಅಕ್ಕಿ ಜೋಳ ಮತ್ತು ಇತರ ದವಸ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಯಾವುದು ಇದೆ ಎಂದು ತಿಳಿದುಕೊಳ್ಳಿ ಹಾಗೂ ಯಾವ ರೇಷನ್ ಕಾರ್ಡ್ ಗೆ ಎಷ್ಟು ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ನಾವು ಕೆಳಗಡೆ ನೀಡಿದ್ದೇವೆ
BPL (PHH) ರೇಷನ್ ಕಾರ್ಡ್:- ಈ ರೇಷನ್ ಕಾರ್ಡ್ (Ration card) ಹೊಂದಿದಂತ ಕುಟುಂಬಗಳಿಗೆ ಪ್ರತಿ (per member) ಸದಸ್ಯರಿಗೆ 8 K.G ಅಕ್ಕಿ ಮತ್ತು 2 K.G ಜೋಳ ನೀಡಲಾಗುತ್ತದೆ, ಮತ್ತು ಈ ಪಡಿತರವು ಸಂಪೂರ್ಣವಾಗಿ ಉಚಿತವಾಗಿ ಅಂದರೆ ಯಾವುದೇ ಹಣ ಇಲ್ಲದೆ ಈ ಎಲ್ಲಾ ವಸ್ತುಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿದೆ
ಅಂತೋದಯ ಕಾರ್ಡ್:- ಅಂತೋದಯ ಕಾರ್ಡ್ ಹೊಂದಿದಂತ ಕುಟುಂಬದಾರರಿಗೆ ಪ್ರತಿ ಕುಟುಂಬಕ್ಕೆ 21 ಕೆ.ಜಿ ಅಕ್ಕಿ ಇದರ ಜೊತೆಗೆ 14 ಕೆ.ಜಿ ಜೋಳ ನೀಡಲಾಗುತ್ತದೆ ಮತ್ತು ಪ್ರಾಂತಗಳ ಅನುಗುಣವಾಗಿ ರಾಗಿ ಅಥವಾ ಜೋಳ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ
ರಾಜ್ಯದ BPL ರೇಷನ್ ಕಾರ್ಡ್ ಹೊಂದಿದವರಿಗೆ:- ಹೌದು ಸ್ನೇಹಿತರೆ, ನಮ್ಮ ರಾಜ್ಯ ಸರ್ಕಾರ ವಿತರಣೆ ಮಾಡಿರುವ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಸದಸ್ಯರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ ಮತ್ತು ಇದರಲ್ಲಿ ಯಾವುದೇ ರೀತಿ ಜೋಳ ಅಥವಾ ರಾಗಿ ನೀಡಲಾಗುವುದಿಲ್ಲ
ಉಚಿತವಾಗಿ ಅಕ್ಕಿ ಜೊತೆಗೆ ಜೋಳ ಮತ್ತು ಇತರ ಪಡಿತರ ಪಡೆಯುವುದು ಹೇಗೆ..?
ನಿಮ್ಮ ಹತ್ತಿರ ಯಾವುದಾದರೂ ಒಂದು ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಅಂದರೆ ಬಿಪಿಎಲ್ ಅಥವಾ ಅಂತೋದಯ ಈ ರೇಷನ್ ಕಾರ್ಡ್ ನಿಮ್ಮ ಬಳಿ ಇದ್ದರೆ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಉಚಿತವಾಗಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಅಥವಾ 8 ಕೆ.ಜಿ ಅಕ್ಕಿ ಜೊತೆಗೆ 2KG ಜೋಳ ಅಥವಾ ರಾಗಿ ನೀವು ಪಡೆದುಕೊಳ್ಳಬಹುದು
ರೇಷನ್ ಪಡೆಯುವಾಗ ಯಾವುದೇ ಅಕ್ರಮ ಅಥವಾ ತೊಂದರೆ ಉಂಟಾದರೆ ನೀವು ನಿಮಗೆ ಸಂಬಂಧಿಸಿದ ತಹಶೀಲ್ದಾರ್ ಕಚೇರಿಗೆ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಭೇಟಿ ನೀಡಿ ಮತ್ತು ನಿಮಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ಉಚಿತ ದೂರವಾಣಿ ಸಂಖ್ಯೆ 1967 ಕರೆ ಮಾಡಿ
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಸಬ್ಸಿಡಿ ಬಗ್ಗೆ ಮಾಹಿತಿ ಬೇಕಾದರೆ ನಮ್ಮ WhatsApp ಚಾನಲ್ ಹಾಗೂ Telegram ಚಾನಲ್ಗಳಿಗೆ ನೀವು ಸೇರಿಕೊಳ್ಳಿ
1 thought on “Ration Cards News: ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಲ್ಲಿ ರಾಗಿ, ಜೋಳ ಮತ್ತು ಇತರ ದವಸ ಧಾನ್ಯಗಳು ವಿತರಣೆ”